ನಿಕಟ ಸಂಬಂಧವು ದೈಹಿಕ ಅಥವಾ ಭಾವನಾತ್ಮಕ ಸಲಿಗೆಯನ್ನು ಒಳಗೊಳ್ಳುವ ಅಂತರವ್ಯಕ್ತೀಯ ಸಂಬಂಧ. ನಿಕಟ ಸಂಬಂಧವು ಸಾಮಾನ್ಯವಾಗಿ ಲೈಂಗಿಕ ಸಂಬಂಧವಾಗಿರುತ್ತದಾದರೂ, ಅದು ಕುಟುಂಬ, ಸ್ನೇಹಿತರು, ಅಥವಾ ಪರಿಚಿತ ವ್ಯಕ್ತಿಗಳನ್ನು ಒಳಗೊಂಡ ಅಲೈಂಗಿಕ ಸಂಬಂಧವೂ ಆಗಿರಬಹುದು. == ಸಲಿಗೆ == ಸಲಿಗೆಯು ನಿಕಟ, ವೈಯಕ್ತಿಕ ಸಂಬಂಧದಲ್ಲಿರುವ ಮತ್ತು ಒಟ್ಟಾಗಿ ಸೇರಿರುವ ಅನಿಸಿಕೆಯನ್ನು ಒಳಗೊಳ್ಳುತ್ತದೆ. ಇದು ಬೇರೊಬ್ಬರ ಜ್ಞಾನ ಹಾಗೂ ಅನುಭವದ ಮೂಲಕ ರೂಪಗೊಂಡ ಬಂಧದ ಪರಿಣಾಮವಾಗಿ ಮತ್ತೊಬ್ಬರೊಂದಿಗೆ ಉಂಟಾದ ಪರಿಚಿತ ಮತ್ತು ಬಹಳ ನಿಕಟ ಭಾವಾತ್ಮಕ ಸಂಬಂಧವಾಗಿರುತ್ತದೆ. == ಉಲ್ಲೇಖಗಳು ==